ನವೀಕರಣಗಳುarrow

    PMFBY Enrolment Process for New Farmer

    ದಾಖಲಾತಿ ವಿಧಾನ

    ಸಾಲ ಪಡೆದ ಕೃಷಿಕರುಸಾಲ-ಪಡೆಯದ ಕೃಷಿಕರು

    ವ್ಯಾಖ್ಯಾನಿಸಲಾದ FIs ಗಳಿಂದ ಅಧಿಸೂಚಿತ ಬೆಳೆಗಳಿಗಾಗಿ ಅಲ್ಪಾವಧಿಯ ಸೀಸನಲ್‌ ಆ್ಯಗ್ರಿಕಲ್ಚರಲ್‌ ಆಪರೇಶನ್ಸ್ (SAO) ಲೋನಗಳು/ಕೆಸಿಸಿ (ಕಿಸಾನ್‌ ಕ್ರೆಡಿಟ್‌ ಕಾರ್ಡ್‌) ಮಂಜೂರಾದ ಎಲ್ಲಾ ರೈತರು, NCIP ಪೋರ್ಟಲ್‌ ಮೂಲಕ FI ಗಳಿಂದ ಕೃಷಿಕರ ದಾಖಲಾತಿ ಮಾಡಲಾಗುವುದು.

    ಕೃಷಿಕರು ನಿಗದಿಪಡಿಸಿದ ದಿನಾಂಕದೊಳಗೆ, ನಿರ್ದಿಷ್ಟ ಫಾರ್ಮ್ಯಾಟನಲ್ಲಿ ಪೂರ್ಣವಾಗಿ ಪ್ರಸ್ತಾಪನೆ ಫಾರ್ಮ್‌ ಅನ್ನು ಭರ್ತಿ ಮಾಡಿ, ಫಾರ್ಮ್‌ ಅನ್ನು ಸಲಿಸಲು ಸಮೀಪದ ಬ್ಯಾಂಕ್‌ ಶಾಖೆ/ PACS/ ಇನ್‌ಶ್ಯೂರನ್ಸ್‌ ಕಂಪನಿಯ ಅಧಿಕೃತ ಚ್ಯಾನೆಲ್‌ ಪಾರ್ಟ್ನರ್ ಅನ್ನು ಸಂಪರ್ಕಿಸಬಹುದು ಹಾಗೂ ಇನ್‌ಶ್ಯೂರನ್ಸ್‌ಗಾಗಿ ಪ್ರಸ್ತಾಪಿತ ಸಾಗುವಳಿ ಭೂಮಿ /ಬೆಳೆ ಯಲ್ಲಿ (ಉದಾ.ಮಾಲಿಕತ್ವ/ಗೇಣಿದಾರಿಕೆ/ಸಾಗುವಳಿ ಹಕ್ಕುಗಳು) ಅವರ ವಿಮೆ ಮಾಡಬಹುದಾದ ಹಿತಾಸಕ್ತಿಯ (ಇನ್‌ಶ್ಯೂರೇಬಲ್‌ ಇಂಟ್ರೆಸ್ಟ್‌) ಬಗ್ಗೆ ಅಗತ್ಯ ದಾಖಲೆಗಳ ಸಾಕ್ಷಿಯೊಂದಿಗೆ ಬ್ಯಾಂಕ್‌ ಶಾಖೆ /ಇನ್‌ಶ್ಯೂರನ್ಸ್‌ ಇಂಟರ್‌ಮೇಡಿಯೇಟರಿ/ CSC ಗೆ ಅಗತ್ಯವಾದ ಪ್ರೀಮಿಯಂ ಅನ್ನು ಡಿಪಾಸಿಟ್‌ ಮಾಡಬೇಕು. ಯಾವುದೇ ನಿರ್ದಿಷ್ಟ ರಾಜ್ಯದ ಆಧಾರದ ಮೇಲೆ ನೀಡಿದ ಅಧಿಸೂಚನೆಯಲ್ಲಿ ಅಗತ್ಯವಿದ್ದರೆ ಹೆಚ್ಚುವರಿ ವಿವಿರವನ್ನು ಒದಗಿಸಲು ಕೃಷಿಕರನ್ನು ಕೇಳಬಹುದು.

    ವಿಮಾರಕ್ಷಣೆಗಾಗಿ ಅಪೇಕ್ಷಿಸುವ ಕೃಷಿಕರು ಗೊತ್ತುಪಡಿಸಿದ ಬ್ಯಾಂಕ್‌ನ ಶಾಖೆಯಲ್ಲಿ ಒಂದು ಖಾತೆಯನ್ನು ತೆರೆಯಬೇಕು/ನಿರ್ವಹಿಸಬೇಕು, ಹಾಗೂ ವಿವರಗಳನ್ನು ಪ್ರಸ್ತಾವನೆಯ ಫಾರ್ಮ್‌ನಲ್ಲಿ ಒದಗಿಸಬೇಕು.

    ಅಧಿಸೂಚನೆಯಲ್ಲಿ ಘೋಷಿಸಿದಂತೆ ನಿಗದಿತ ಕಟ್‌-ಆಫ್‌ ದಿನಾಂಕದವರೆಗೆ ಮಾತ್ರ ಇನ್‌ಶ್ಯೂರನ್ಸ್‌ ಪ್ರೊಪೋಸಲ್‌ಗಳನ್ನು ಸ್ವೀಕರಿಸಲಾಗುತ್ತದೆ.

    ಕೃಷಿಕರು ಪ್ರಪೋಸಲ್‌ಗಳಲ್ಲಿ ಅವರ ಭೂಮಿಯ ಗುರುತಿನ ಸಂಖ್ಯೆಯನ್ನು ನಮೂದಿಸಬೇಕು ಹಾಗೂ ಸಾಗುವಳಿ ಭೂಮಿಯ ಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಯ ಪುರಾವೆಯನ್ನು ಒದಗಿಸಬೇಕು. ಬೆಳೆಗಾರರು ಬಿತ್ತನೆ ಮಾಡಿದ ಕ್ಷೇತ್ರದ ದೃಢೀಕರಣ ಪ್ರಮಾಣಪತ್ರವನ್ನು ನೀಡಬೇಕು.